Loading...

About Us

ಈ ರೀತಿಯ ಮಳಿಗೆ ಆರಂಭಿಸಲು ಕಾರಣ ಮತ್ತು ನನ್ನ ಕಿರು ಪರಿಚಯ ಇಲ್ಲಿದೆ. ನಾನು ಮೂಲತಃ ವ್ಯಾಪಾರಿ ಕುಟುಂಬದಿಂದ ಬಂದವನಲ್ಲ. “ಅಗತ್ಯವೇ ಸಂಶೋಧನೆಯ ಮೂಲ” ಎಂಬಂತೆ ಹುಟ್ಟಿತು ಈ “ಟೋಟಲ್ ಕನ್ನಡ” ಸಂಸ್ಥೆ. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನ ಜಯನಗರದಲ್ಲಿ. ಇಲ್ಲೆಲ್ಲಾ ಯಾವುದೇ ಮ್ಯೂಸಿಕ್ ಅಂಗಡಿಗೆ ಹೋದರೂ ಅಲ್ಲಿ, ಬೇರೆ ಭಾಷೆಯ ಸಿ.ಡಿ.ಗಳಿಗೆ ಪ್ರಾಧಾನ್ಯತೆ ಇರುತ್ತಿತ್ತು. ಹಾಗೂ ಎಲ್ಲಾ ಕನ್ನಡ ಸಿ.ಡಿ.ಗಳು ಒಂದೇ ಕಡೆ ಸಿಗುತ್ತಿರಲಿಲ್ಲ. ೧೯೯೮ ರಲ್ಲಿ ನಾನು ಅಮೇರಿಕಾಕ್ಕೆ ಕೆಲಸಕ್ಕೆ ಹೋದಾಗ, ಅಲ್ಲಿ ಎಲ್ಲಾ ಭಾರತದ ದಿನಸಿ ಅಂಗಡಿಗಳಲ್ಲಿ, ವಿಡಿಯೋ ಅಂಗಡಿಗಳಲ್ಲಿ, ಕನ್ನಡ ಭಾಷೆಯೊಂದನ್ನು ಬಿಟ್ಟು ಮಿಕ್ಕೆಲ್ಲಾ ಭಾಷೆಯ ಚಲನಚಿತ್ರಗಳು ಸಿಗುತ್ತಿತ್ತು. ಅನಿವಾಸಿ ಕನ್ನಡಿಗರಿಗೆ ಕನ್ನಡದ ಪುಸ್ತಕಗಳು, ಚಲನಚಿತ್ರಗಳು ಖಂಡಿತವಾಗಿಯೂ ಬೇಕಿತ್ತು. ಇದೇ ಸಮಸ್ಯೆ, ಭಾರತದ ಇತರೆ ರಾಜ್ಯಗಳಲ್ಲಿರುವ ಕನ್ನಡಿಗರಿಗೂ ಸಹ ಕಾಡುತ್ತಿತ್ತು. ಇದಕ್ಕೆಲ್ಲಾ ಪರಿಹಾರೋಪವಾಗಿ, ನಾನು ೨೦೦೧ ರಲ್ಲಿ “ಟೋಟಲ್ ಕನ್ನಡ ಡಾಟ್ ಕಾಮ್” ಎಂಬ ಅಂತರ್ಜಾಲವನ್ನು ಆರಂಭಿಸಿದೆ. ಈ ಅಂತರ್ಜಾಲದ ಮೂಲಕ ಪ್ರಪಂಚದ ಎಲ್ಲಾ ಮೂಲೆಗಳಲ್ಲಿರುವ ಕನ್ನಡಿಗರಿಗೆ , ಕನ್ನಡದ ಪುಸ್ತಕಗಳನ್ನು, ಸಿ.ಡಿ.ಗಳನ್ನು ತಲುಪಿಸುತ್ತಿರುವೆವು. ಹಾಗೂ ಬೆಂಗಳೂರಿನಲ್ಲಿಯೂ ಸಹ ಸಮಗ್ರ ಕನ್ನಡ ಮಳಿಗೆಯ ಅವಶ್ಯಕತೆ ಮನಗಂಡು, ೨೦೦೬ ರಲ್ಲಿ, ಜಯನಗರ ೪ನೇ ಬ್ಲಾಕ್ ನಲ್ಲಿ ಮೊದಲ ಮಳಿಗೆಯನ್ನು ಆರಂಭಿಸಿದೆ. ಈ ರೀತಿಯ ಮಳಿಗೆ ಕರ್ನಾಟಕದಲ್ಲೇ ಪ್ರಥಮ. ಇದರೊಂದಿಗೆ, ಈಗ ಮಾರುತಿ ವ್ಯಾನ್ ಮೂಲಕ ಸಹ ಕನ್ನಡ ಪುಸ್ತಕ ಮತ್ತು ಸೀ.ಡಿ ಗಳನ್ನು ಮಾರಾಟ ಮಾಡುತ್ತಿದ್ದೇವೆ. ನಾವು ಒಂದೇ ನಿರ್ದಿಷ್ಟ ಸ್ಠಳದಲ್ಲಿ ವಾಹನ ನಿಲ್ಲಿಸದೆ, ಪ್ರತಿನಿತ್ಯವೂ ಒಂದೊಂದು ಬಡಾವಣೆಯಲ್ಲಿ ನಿಲ್ಲಿಸಿ ವ್ಯಾಪಾರ ಮಾಡುತ್ತೇವೆ. ನಾವು ನಕಲಿ ಸೀ.ಡಿ.ಗಳನ್ನಾಗಲಿ, ಕಳ್ಳತನದ ಸರಕುಗಳನ್ನಾಗಲಿ ಮಾರುವುದಿಲ್ಲ. “ಟೋಟಲ್ ಕನ್ನಡ” ಮಳಿಗೆಯಲ್ಲಿ ಕನ್ನಡ ಡಿ.ವಿ.ಡಿ, ವಿ.ಸಿ.ಡಿ, ಆಡಿಯೋ ಸಿ.ಡಿ, ಕ್ಯಾಸೆಟ್, ಎಮ್.ಪಿ.ತ್ರಿ, ಕನ್ನಡ ಟೀ-ಶರ್ಟ್ಸ್, ಕನ್ನಡ ಗ್ರೀಟಿಂಗ್ ಕಾರ್ಡ್ಸ್ , ಕನ್ನಡ ಬಾವುಟಗಳು, ಹಾಗೂ ಪುಸ್ತಕಗಳನ್ನು ಮಾತ್ರ ಮಾರಲಾಗುತ್ತಿದೆ. ನಮ್ಮದೇ ನಾಡಿನಲ್ಲಿ ಕನ್ನಡದ ಮೇಲೆ ಅನ್ಯಭಾಷೆಗಳ ದಬ್ಬಾಳಿಕೆಗೆ ಪ್ರತ್ಯುತ್ತರವಾಗಿ ಬೆಂಗಳೂರಿನ ಪ್ರಮುಖ ಬಡಾವಣೆಯಲ್ಲಿ ಈ ನಮ್ಮ ಸಣ್ಣ ಪ್ರಯತ್ನ. ನಮ್ಮಲ್ಲಿ ಪ್ರತಿಯೊಬ್ಬರ ಅಭಿರುಚಿಗೆ ತಕ್ಕಂತೆ ಕ್ಯಾಸೆಟ್, ಸಿ.ಡಿ ಹಾಗೂ ಪುಸ್ತಕಗಳು ದೊರೆಯುತ್ತವೆ. ನಮ್ಮಲ್ಲಿ ಹೊಸ ಹಾಗೂ ಹಳೆಯ ಚಲನಚಿತ್ರಗಳು, ಹೊಸ ಹಾಗೂ ಹಳೆಯ ಚಿತ್ರಗೀತೆಗಳು, ಚಿತ್ರಕಥೆಗಳು ದೊರೆಯುತ್ತವೆ ನಮ್ಮಲ್ಲಿ ಕನ್ನಡ ಜಾನಪದ ಗೀತೆಗಳು, ಭಾವಗೀತೆಗಳು, ಭಕ್ತಿಗೀತೆಗಳು, ನಾಟಕಗಳು, ಐತಿಹಾಸ ನಾಟಕಗಳು, ಯಕ್ಷಗಾನ, ಹರಿಕಥೆ, ತುಳು, ಶಾಸ್ತ್ರೀಯ, ಹಾಸ್ಯ, ರೀಮಿಕ್ಸ್, ಕರೋಕಿ, ಮಕ್ಕಳ, ಶೈಕ್ಷಣಿಕ, ಟಿ.ವಿ. ಧಾರವಾಹಿಗಳು, ಮುಂತಾದ ಸಿ.ಡಿ-ಕ್ಯಾಸೆಟ್‌ಗಳು ದೊರೆಯುತ್ತವೆ. ಹೊಸದಾಗಿ ಬಿಡುಗಡೆಯಾದ ಸಿ.ಡಿ-ಕ್ಯಾಸೆಟ್-ಪುಸ್ತಕಗಳನ್ನು ನಿಯಮಿತವಾಗಿ ನಮ್ಮ ಸಂಗ್ರಹಣಕ್ಕೆ ಸೇರಿಸುತ್ತೇವೆ. ಪುಸ್ತಕ ವಿಭಾಗದಲ್ಲಿ ಪೂರ್ಣಚಂದ್ರ ತೇಜಸ್ವಿ, ಕುವೆಂಪು, ಕಾರಂತ, ಮುಂತಾದ ಶ್ರೇಷ್ಠ ಕವಿ-ಲೇಖಕರ ಪುಸ್ತಕಗಳು, ಕೈಲಾಸಂ, ಕಾರ್ನಾಡ್ ಮುಂತಾದವರ ಜನಪ್ರಿಯ ನಾಟಕಗಳು, ಮಕ್ಕಳ ಪುಸ್ತಕಗಳು, ಮನೋವಿಕಾಸ ಪುಸ್ತಕಗಳು, ಧಾರ್ಮಿಕ, ಶೈಕ್ಷಣಿಕ, ಪ್ರವಾಸೋದ್ಯಮ, ಅಡುಗೆ ಪುಸ್ತಕಗಳು, ಗಾದೆಗಳು, ಒಗಟುಗಳು, ವಚನಗಳು, ದಾಸಪದಗಳು, ಶ್ಲೋಕಗಳು ಮುಂತಾದ ಅನೇಕ ಪುಸ್ತಕಗಳು ದೊರೆಯುತ್ತವೆ. ನಮ್ಮ ಮಳಿಗೆಯಲ್ಲಿ ಖರೀದಿಸುವ ಹೊರತಾಗಿ, ನಮ್ಮ “ಆನ್‌ಲೈನ್” ಸೇವೆಯ ಮೂಲಕ ಅಥವ ಫೋನ್/ಎಸ್‌ಎಮ್‌ಎಸ್ ಮೂಲಕ ಸಹ ಖರೀದಿಸಬಹುದು. ಪ್ರಪಂಚದ ಯಾವುದೇ ದೇಶದಲ್ಲಿ ನೆಲೆಸಿರುವ ಕನ್ನಡಿಗರು ನಮ್ಮ ಸೇವೆಯ ಉಪಯೋಗವನ್ನು ಪಡೆಯಬಹುದು. ಸಾಪ್ಟ್ ವೇರ್ ವೃತ್ತಿಯಲ್ಲಿದ್ದ ನಾನು ಆ ವೃತ್ತಿಯನ್ನು ತ್ಯಜಿಸಿ, ನಶಿಸುತ್ತಿರುವ ನಮ್ಮ ಭಾಷೆಯ ಉಳಿವಿಗಾಗಿ ಈ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿರುವೆ. ಧನ್ಯವಾದಗಳೊಂದಿಗೆ, ವಿ.ಲಕ್ಷ್ಮೀಕಾಂತ್

Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches, 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.

Objective / Mission

To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.


Background / Reason to start Total Kannada Store

Situation of our mother tongue language Kannada today is deteriorating today because of various reasons. This has resulted in slow death of our culture, our traditions, and our literature in our homeland Karnataka, India. Since our Kannada language is one of the fastest diminishing language of in south East Asia, we are trying to retain the glory of our language by promoting Kannada books, movies and music and thus save our language and keep our language alive.


About Myself

I grew up in Jayanagar, Bangalore and when I used to visit music shops, Kannada CDs were always in back shelves and was not given much importance.And when I moved to USA in 1998, I started observing non-availability of Kannada CDs at music shops and grocery shops. At this point I decided to start the website http://www.totalkannada.com to bring awareness about Kannada movies, culture and Karnataka, through articles written by me and other writers. Then I started selling Kannada CDs online. In 2006, I started Total Kannada store at Jayanagara 4thBlock, Bengalooru. Apart from our stores, we have “Sanchaari Store” too. Our van carrying important Kannada movies, books and music can be seen at prominent places in Bangalore daily.